ಉದ್ಯಾನ ನಗರಿ ಬೆಂಗಳೂರು ಕರ್ನಾಟಕ ರಾಜ್ಯದ ರಾಜಧಾನಿ. ಬೆಂಗಳೂರು ನಗರ ಒಮ್ಮೆ ವನ ವೃಕ್ಷಗಳ ಹೂದೋಟಗಳ ನಗರವಾಗಿ ಸದಾ ಹಸಿರಾಗಿರುತ್ತಿತ್ತು. ಕ್ರಮೇಣ ಘಟಿಸಿದ ಬದಲಾವಣೆಯೊಂದಿಗೆ ಸಾಗುತ್ತ ಕಾಂಕ್ರೀಟ್ ನಗರಿಯಾಗಿ ನಂತರ ಸಿಲಿಕಾನ್ ಸಿಟಿಯಾಗಿ ಬೆಳೆಯುತ್ತಿದೆ.
ಬೆಂಗಳೂರು ನಗರ ಸಹಕಾರ ಕ್ಷೇತ್ರದ ತವರೂರು ಎಂದು ಹೇಳಿದರೆ ಉತ್ಪೆçÃಕ್ಷೆಯಲ್ಲ. ಬೆಂಗಳೂರು ನಗರ ಜಿಲ್ಲೆಯಲ್ಲಿ ಸಹಕಾರಿ ಬ್ಯಾಂಕಿನಿAದ ಹಿಡಿದು, ಪತ್ತು, ಗೃಹನಿರ್ಮಾಣ, ಬಳಕೆ, ನೇಕಾರರು, ವ್ಯವಸಾಯ, ಹಾಲು, ಮಹಿಳಾ, ಕೈಗಾರಿಕೆ, ನೂಲಿನ ಗಿರಣಿ, ಮೀನು, ಕುರಿ ಮತ್ತು ಕೋಳಿ ಸಾಕಾಣಿಕೆದಾರ ಸಹಕಾರ ಸಂಘಗಳವರೆಗೆ ಎಲ್ಲ ವಿಧವಾದ ಸಹಕಾರ ಸಂಘಗಳು ಸ್ಥಾಪಿತವಾಗಿದೆ. ಅವಿಭಜಿತ ಬೆಂಗಳೂರು ಜಿಲ್ಲೆಯಲ್ಲಿ ಬೆಂಗಳೂರು ನಗರ ಸೇರಿದಂತೆ ೧೧ ತಾಲ್ಲೂಕುಗಳು ಸೇರಿದ್ದವು. ಜಿಲ್ಲೆಗೆ ಒಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕು, ಒಂದು ಜಿಲ್ಲಾ ಸಹಕಾರ ಯೂನಿಯನ್, ಹಾಗೂ ಸಹಕಾರಿ ಸಂಸ್ಥೆಗಳ ಮೇಲ್ವಿಚಾರಕ ಅಧಿಕಾರಿಯಾಗಿ ಒಬ್ಬರು ಸಹಕಾರ ಸಂಘಗಳ ಉಪನಿಬಂಧಕರು ಕಾರ್ಯನಿರ್ವಹಿಸುತ್ತಿದ್ದರು.
ಕೈಗಾರಿಕೆಗಳ ಸ್ಥಾಪನೆಯಿಂದಾಗಿ ಬೆಂಗಳೂರು ರಾಜ್ಯದ ರಾಜ್ಯಧಾನಿಯಾಗಿರುವುದರಿಂದಾಗಿ ಬೆಂಗಳೂರು ವೇಗವಾಗಿ ಬೆಳೆಯುತ್ತ ಸಾಗಿತು. ಬೆಂಗಳೂರು ಬೆಳೆದಂತೆಲ್ಲ ಆಡಳಿತಾತ್ಮಕ ದೃಷ್ಟಿಯಿಂದ ಬೆಂಗಳೂರು ಜಿಲ್ಲೆಯನ್ನು ೧೯೭೯ ರಲ್ಲಿ ವಿಭಜಿಸಿ ೧೯೮೦ ರಲ್ಲಿ ಎರಡು ಜಿಲ್ಲೆಗಳನ್ನಾಗಿ ವಿಂಗಡಿಸಿ ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಜಿಲ್ಲೆಗಳಾಗಿ ಸ್ಥಾಪನೆ ಮಾಡಲಾಯಿತು. ಬೆಂಗಳೂರು ನಗರ ಜಿಲ್ಲೆಗೆ ಬೆಂಗಳೂರು ನಗರ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ದಕ್ಷಿಣ ತಾಲ್ಲೂಕು ಹಾಗೂ ಆನೇಕಲ್ ತಾಲ್ಲೂಕುಗಳನ್ನು ಸೇರ್ಪಡೆ ಮಾಡಲಾಯಿತು. ಅದರ ಪ್ರಕಾರವಾಗಿ ಒಬ್ಬರು ಸಹಕಾರ ಸಂಘಗಳ ಉಪನಿಬಂಧಕರನ್ನು ಬೆಂಗಳೂರು ನಗರ ಜಿಲ್ಲೆಗೆ ಪ್ರತ್ಯೇಕವಾಗಿ ನೇಮಿಸಲಾಯಿತು. (೧೯೮೨) ಸಹಕಾರ ಕ್ಷೇತ್ರವೂ ಬೆಳೆಯುತ್ತ ಸಾಗಿತು. ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಸಹಕಾರ ಸಂಘಗಳ ಸಂಖ್ಯೆ ಹೆಚ್ಚುತ್ತ ನಡೆಯಿತು. ಇವರುಗಳಿಗೆ ಶಿಕ್ಷಣ ತರಬೇತಿ ನೀಡಿ ಸಹಕಾರ ಕ್ಷೇತ್ರದ ಪ್ರಚಾರ ಹಾಗೂ ಇವರುಗಳ ಸಮಸ್ಯೆಗಳಿಗೆ ಸ್ಪಂದಿಸುವ ಜಿಲ್ಲಾ ಮಟ್ಟದ ಯೂನಿಯನ್ ಸ್ಥಾಪನೆಯ ಅವಶ್ಯಕತೆಯನ್ನು ಸಹಕಾರಿಗಳು ಕಂಡುಕೊAಡು ದಿನಾಂಕ: ೦೯-೧೨-೧೯೭೭ ರಲ್ಲಿ ರಾಜ್ಯದ ಹಿರಿಯ ಸಹಕಾರಿಯಾಗಿ ಕರ್ನಾಟಕ ರಾಜ್ಯ ಗೃಹ ನಿರ್ಮಾಣ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷರಾಗಿದ್ದ ದಿವಂಗತ ಶ್ರೀ ಹೆಚ್.ಕೆ.ಕುಮಾರಸ್ವಾಮಿ ಇವರ ನೇತೃತ್ವದಲ್ಲಿ ಬೆಂಗಳೂರು ನಗರ ಜಿಲ್ಲಾ ಸಹಕಾರ ಯೂನಿಯನ್ ಸ್ಥಾಪಿತವಾಯಿತು.
