• ಫೋನ್: +91 94485 24345 / +91 98451 50634
  • ಇಮೇಲ್: bcdcu1977@gmail.com
ಸಂಪರ್ಕದಲ್ಲಿರಿ:

ಚರ್ಚಾ ಪ್ರಬಂಧ

ಸಹಕಾರ ಕ್ಷೇತ್ರದಿಂದ ಯುವಕರು ನಾಯಕರಾಗಬಹುದು

ಬೆಂಗಳೂರು : ದೇಶದ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿರುವ ಸಹಕಾರ ಕ್ಷೇತ್ರ ಇಂದು ಪ್ರತಿಯೊಂದು ವಲಯದಲ್ಲಿ ಸಕ್ರಿಯವಾಗಿ ಪ್ರಗತಿ ಕಂಡಿದೆ. ದೇಶದಲ್ಲಿ ಸಹಕಾರ ಸಂಸ್ಥೆಗಳು ಬೃಹತ್ತಾಗಿ ಬೆಳೆದಿವೆ. ಲಕ್ಷಾಂತರ ಜನರಿಗೆ ಉದ್ಯೋಗವನ್ನು ನೀಡಿವೆ. ಅನೇಕ ರಾಷ್ಟಿçÃಯ ನಾಯಕರು ಮೂಲತಃ ಸಹಕಾರ ಕ್ಷೇತ್ರದಿಂದ ಬಂದವರಾಗಿದ್ದಾರೆ. ಯುವಕರು ಕೂಡ ಸಹಕಾರ ಕ್ಷೇತ್ರದ ಕುರಿತು ಅರಿತರೆ ಮುಂದಿನ ದಿನಗಳಲ್ಲಿ ಉತ್ತಮ ನಾಯಕರಾಗುವ ಅವಕಾಶವಿದೆ ಎಂದು ಬೆಂಗಳೂರು ನಗರ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷರಾದ ಹೆಚ್.ಟಿ. ನಾಗೇಶ್ ತಿಳಿಸಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಬೆಂಗಳೂರು ನಗರ ಜಿಲ್ಲಾ ಸಹಕಾರ ಒಕ್ಕೂಟ, ಹಾಗೂ ಭಾರತ್ ವಿದ್ಯಾಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ದಿನಾಂಕ ೩೦-೦೮-೨೦೨೪ ರಂದು ಜಿಲ್ಲಾ ಮಟ್ಟದ ಚರ್ಚಾ ಮತ್ತು ಪ್ರಬಂಧ ಸ್ಪರ್ಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.